ಪೋಸ್ಟ್‌ಗಳು

ಜೂನ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭವದ ಮೆರವಣಿಗೆ ಯಲ್ಲಿ ಭಕ್ತಿ ಮತ್ತು ಭಜನೆ

devika nagesh ಭಾನು, 3 ಮೇ, 05:23 AM ಗೆ ks.kendasampige ಭಜನೆ ನಮ್ಮ ದೈನಂದಿನ ಜೀವನದ ಭಾಗವಾಗಿದ್ದ ಕಾಲವೊಂದಿತ್ತು. ಆಗ ನಾವು ಶಾಲೆಗೆ ಹೋಗುವ ಪುಡಿ ಮಕ್ಕಳು. ಮುಸ್ಸಂಜೆಗೆ ಮೊದಲು ಶಾಲೆಯಲ್ಲಿ ಟೀಚರ್ಸ್ ಹೇಳುತ್ತಿದ್ದ ದಿನಚರಿ ಕಾಪಿ ಬರೆಯುವುದು, ಮಗ್ಗಿ ಕಲಿಯುವುದು ಮುಗಿಸಿ ಮಿಂದು ಶುಚಿಯಾಗಿ ಬಂದು ದೇವರ ಪಟದ ಎದುರು ಚಕ್ಕರ ಮೂಟೆ ಹಾಕಿ ಕೂತು ಭಜನೆಗೆ ಶುರು ಹಚ್ಚಬೇಕಿತ್ತು.ಮನೆಯಲ್ಲಿದ್ದ ಎರಡೇ ಎರಡು ಜೋಡಿ ಹಿತ್ತಾಳೆ ತಾಳ ಒಂದು ಚಿಕ್ಕಿಗೆ ಮೀಸಲಿಟ್ಟು ಮಿಕ್ಕಿದ್ದ ಇನ್ನೊಂದು ತಾಳಕ್ಕೆ ನಾವು ಮಕ್ಕಳು ಜಗಳಕ್ಕೆ ನಿಲ್ಲುತ್ತಿದ್ದೆವು. ದೇವರ ನಾಮ ಹೇಳುವುದರಲ್ಲೂ ನಮ್ಮಲ್ಲೇ ಅಕ್ಕ, ತಂಗಿ ಯರಿಗೆ ನಾ ಮುಂದು ತಾ ಮುಂದು ಎಂಬ ಪೈಪೋಟಿ. ಭಜನೆ ಯಲ್ಲಿ ಕೆಲವೊಮ್ಮೆ ಶಾಲಾ ಪಠ್ಯದ ಪದಗಳನ್ನೂ ಹಾಡಿ ಗೆದ್ದ ಭಾವದಲ್ಲಿ ಬೀಗುವುದಿತ್ತು. ಆಗ ಬೆನ್ನ ಹಿಂದೆ ಕೂತ ಚಿಕ್ಕಿ ಮಕ್ಕಳ ತಲೆಗೊಂದು ಕುಟುಕುತ್ತ … ಬಿಟ್ಟ ಪದ ತುಂಬುವಂತೆ ತನ್ನ ಮನದ ಬತ್ತಳಿಕೆಯಿಂದ ಒಂದು ದೇವರ ನಾಮ ಎತ್ತಿಕೊಂಡು ಹಾಡುತ್ತಿದ್ದರು. ಅವರ ಹಾಡಿಗೆ ನಾವು ದ್ವನಿ ಸೇರಿಸುತ್ತಿದ್ದೆವು. ಪ್ರತೀ ದಿನದ ಭಜನೆಯಲ್ಲಿ ಅಕ್ಕನ ಭಾಗ್ಯದ ಲಕ್ಷ್ಮಿ ಬಾರಮ್ಮ…. ನನ್ನ ಸ್ವಾಮಿ ದೇವನೆ ಲೋಕ ಪಾಲನೆ… ಪದಗಳು ಇದ್ದೇ ಇರುತ್ತಿತ್ತು. ಅದು ಎಷ್ಟರಮಟ್ಟಿಗೆ ಅಂದರೆ ತಮ್ಮ ತಂಗಿಯರಿಗೆ ಓದದೆಯೇ ಬಾಯಿ ಪಾಠ ಆಗಿ ಹೋಗಿತ್ತು. ಆಗ ನಮ್ಮ ಅಜ್ಜಿ ಅಡುಗೆಮನೆಯಲ್ಲಿ ರಾತ್ರಿ ಊಟಕ್ಕೆ...